Tuesday, February 1, 2011

ಕೊಲ್ಲುವ - ಕಾಯುವ ವಿದ್ಯೆ


ಕಲಿಯುತ್ತಿದ್ದರು ಕುರವರು - ಪಾಂಡವರು
ಕೊಲ್ಲುವ ವಿದ್ಯೆಯನ್ನು, ಕಲಿಯುತ್ತಿದ್ದನು
ಏಕಲವ್ಯನು ಕಾಯುವ ವಿದ್ಯೆಯನ್ನು.

ಕಣ್ಣಲ್ಲಿ ಗುರು ಮೂರ್ತಿ ತುಂಬಿದ್ದ ಅಂತರಂಗದಲ್ಲಿ
ತನಗೆ ತಾನೇ ಗುರುವಾದ ಈ ಶಿಷ್ಯ ,
ಹಗಲು - ರಾತ್ರಿ , ಹಸಿವು ತೃಷೆಗಳ
ಮರೆತ ಅನವರತ .

ಆಯಿತು ಕರಗತ , ಅಮೃತ ವಿದ್ಯೆ !
ಬೊಗಳುವ ಶ್ವಾನಗಳ ಬಾಯಿಗೆ
ಬಾಣಗಳ ಬೀಗ ಹಾಕಿದಾಗ...

ಅರ್ಜುನನನಿಗೆ ಅರ್ಥವಾಯಿತು ಇವನು
ಯಾರ ಶಿಷ್ಯನೆಂದು, ಕೇಳಿದ ತನ್ನ ಗುರುವನ್ನು
ನಾನು ಸವ್ಯಸಾಚಿ ಹೇಗೆ ಎಂದು?!




ದ್ರೋಣರಿಗೆ  ತಿಳಿದಿತ್ತು ಕೊಲ್ಲುವ - ಕಾಯುವ ವಿದ್ಯೆ,
ಪರೀಕ್ಷೆಯಾಯಿತು ಏಕಲವ್ಯನ ಅಹಿಂಸಕ ವಿದ್ಯೆ !

ಅಪ್ಪಣೆಯಾಗಲು ಗುರುವಿನ ಆಜ್ಞೆ
ಆಯಿತು ಬಲಗೈ ಹೆಬ್ಬೆರಳು  ಗುರು
ಪಾದಂಗಳದಲ್ಲಿ ಗುರು ದಕ್ಷಿಣೆ !!

ಪ್ರಸಿದ್ದವಾಯಿತು ಕೊಲ್ಲುವ ವಿದ್ಯೆ ! ಜಗತ್ತಿನಲ್ಲಿ
ಏಕಲವ್ಯ ಉಳಿದಿದ್ದ , ಕಾಯುವ ವಿದ್ಯಾ ಮರೆಯಾಗಿತ್ತು.
















No comments: